SBI ಏಟಿಎಂ ಕಾರ್ಡ್ ಇದ್ದವರಿಗೆ ಜಾರಿಗೆ ಬಂತು ಹೊಸ ನಿಯಮ.
SBI ನ ಈ ಹೊಸ ಸೇವೆ ATM ಕಾರ್ಡ್ ಕಳೆದುಕೊಂಡವರಿಗೆ ಹೆಚ್ಚು ಸಹಾಯವಾಗಲಿದೆ. SBI ಬ್ಯಾಂಕ್ ಖಾತೆ ಹೊಂದಿರುವವರು ಈ ಮಾಹಿತಿಯ ಬಗ್ಗೆ ತಿಳಿದುಕೊಳ್ಳುವ ಮೂಲಕ ನೀವು ATM ನಲ್ಲಿ Debit Card ಇಲ್ಲದೆಯೇ ಹಣವನ್ನು ತೆಗೆಯುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಿ.
ಸದ್ಯ ದೇಶದಲ್ಲಿ UPI Payment ಜನಸ್ನೇಹಿಯಾಗಿದೆ. ಅನೇಕ ರೀತಿಯ ವಹಿವಾಟುಗಳು UPI ಮೂಲಕವೇ ನಡೆಯುತ್ತಿದೆ. UPI Application ಗಳು ಪರಿಚಯವಾದಾಗಿನಿಂದ ಜನರು ಬ್ಯಾಂಕ್ ಗೆ ಭೇಟಿ ನೀಡುವುದನ್ನು ಕಡಿಮೆ ಮಾಡಿದ್ದಾರೆ. ಇನ್ನು UPI ತನ್ನ ಅಪ್ಲಿಕೇಶನ್ ನಲ್ಲಿ ಹೊಸ ಸೇವೆಯನ್ನು ಪರಿಚಯಿಸುತ್ತಿದ್ದಂತೆ ವಿವಿಧ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಹೊಸ ಸೇವೆಯನ್ನ ನೀಡಲು ಮುಂದಾಗುತ್ತದೆ. ಸದ್ಯ SBI ತನ್ನ ಗ್ರಾಹಕರಿಗೆ ಹೊಸ App ಅನ್ನು ಪರಿಚಯಿಸುವ ಮೂಲಕ ಆನ್ಲೈನ್ ವಹಿವಾಟನ್ನು ಇನ್ನಷ್ಟು ಸುಲಭಗೊಳಿಸಿದೆ.
SBI YONO Application
ಪ್ರತಿಷ್ಠಿತ ಸರ್ಕಾರೀ ಬ್ಯಾಂಕ್ ಗಳಲ್ಲಿ ಒಂದಾದ SBI ಇದೀಗ ತನ್ನ ಆನ್ಲೈನ್ ಬ್ಯಾಂಕಿಂಗ್ ಅನ್ನು ಇನ್ನಷ್ಟು ವಿಸ್ತರಿಸಲು ಸಿದ್ಧತೆ ನಡೆಸುತ್ತಿದೆ. ಇದೀಗ ಎಸ್ ಬಿಐ ತನ್ನ SBI YONO Application ನ ನವೀಕರಿಸಿದ ಆವೃತ್ತಿಯನ್ನು ಬಿಡುಗಡೆ ಮಾಡಿದೆ.
ಈ ನವೀಕರಿಸಿದ YONO ಅಪ್ಲಿಕೇಶನ್ ನ ಮೂಲಕ ಗ್ರಾಹಕರು ನೇರ ಪಾವತಿಯನ್ನು ಮಾಡಲು ಸಾಧ್ಯವಾಗುತ್ತದೆ. ಸದ್ಯ SBI ತನ್ನ YONO ಅಪ್ಲಿಕೇಶನ್ ಅನ್ನು UPI ಗೆ Link ಮಾಡುವ ಮೂಲಕ ಗ್ರಾಹಕರಿಗೆ ನಗದು ಡ್ರಾ ಮಾಡುವುದನ್ನು ಇನ್ನಷ್ಟು ಸರಳಗೊಳಿಸಿದೆ. YONO ಸ್ಟಿಕ್ಕರ್ ಅಂಟಿಸಲಾಗಿರುವ ATM ಗಳಲ್ಲಿ ಮಾತ್ರ ಈ ಸೇವೆಯನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ.
ATM Card ಇಲ್ಲದೆ ಹಣ ತೆಗೆಯುವುದು ಹೇಗೆ ಎನ್ನುವುದನ್ನು ತಿಳಿದುಕೊಳ್ಳಿ
*ನೀವು ಮೊದಲನೆಯದಾಗಿ ನಿಮ್ಮ ಫೋನ್‌ನಲ್ಲಿ Yono ಅಪ್ಲಿಕೇಶನ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಿ.
*ನಂತರ ನೀವು ‘Cash Withdrawal’ ಆಯ್ಕೆಯನ್ನು ಆರಿಸಿ.
*ನೀವು ಹಿಂಪಡೆಯಲು ಬಯಸುವ ನಗದು ಮೊತ್ತವನ್ನು ನಮೂದಿಸಿ.
*ನಂತರ ನಿಮ್ಮ ATM ಅನ್ನು ಆಯ್ಕೆ ಮಾಡಿ.
*ಈಗ QR Code ಜನರೇಟ್ ಆಗುತ್ತದೆ.
*ನೀವು QR ಕೋಡ್ ಅನ್ನು ಸ್ಕ್ಯಾನ್ ಮಾಡಬೇಕು.
*QR ಕೋಡ್ ಅನ್ನು ಸ್ಕ್ಯಾನ್ ಮಾಡಿದ ನಂತರ, ನಿಮ್ಮ UPI ಐಡಿ ಮತ್ತು UPI ಪಿನ್ ಅನ್ನು ನಮೂದಿಸಿ.
*UPI ಪಿನ್ ನಮೂದಿಸಿದ ನಂತರ, ಸಲ್ಲಿಸು ಆಯ್ಕೆಯ ಮೇಲೆ ಕ್ಲಿಕ್ ಮಾಡಿದರೆ ನೀವು ATM Card ಬಳಸದೆ ATM ನಿಂದ ಹಣವನ್ನು ಪಡೆಯಬಹುದು.



