Join Join

1000 ಕೋಟಿ ಒಡೆಯ! ಆದ್ರೂ 20 ವರ್ಷ ಹಳೆಯ ಸೆಕೆಂಡ್ ಹ್ಯಾಂಡ್ ಕಾರಿನಲ್ಲಿ ಓಡಾಡ್ತಾರೆ ಈ ಸೂಪರ್‌ ಸ್ಟಾರ್‌!

ಸಾಮಾನ್ಯವಾಗಿ ಚಲನಚಿತ್ರ ತಾರೆಯರ (Celebrities) ಮತ್ತು ಕ್ರಿಕೆಟಿಗರ ಜೀವನಶೈಲಿ (Cricket Lifestyle) ಹೇಗಿರುತ್ತದೆ ಅಂತ ಸ್ಪೆಷಲ್ ಆಗಿ ಹೇಳಬೇಕೆ? ಚಿತ್ರ ತಾರೆಯರ ಜೀವನಶೈಲಿ ಅಂತೂ ತುಂಬಾನೇ ಐಷಾರಾಮಿ (Luxury) ಜೀವನವಾಗಿರುತ್ತದೆ. ಅವರು ವಾಸವಿರಲು ಅಲಂಕಾರಿಕ ಮಹಲುಗಳನ್ನು ಹೊಂದಿರುತ್ತಾರೆ, ತಿರುಗಾಡಲು ದೊಡ್ಡ ದೊಡ್ಡ ಕಾರುಗಳನ್ನು (Car) ಇಟ್ಟುಕೊಂಡಿರುತ್ತಾರೆ ಮತ್ತು ಸಮಯ ಸಿಕ್ಕರೆ ಖಾಸಗಿ ಜೆಟ್‌ಗಳಲ್ಲಿ (Private Jet) ಕೂತು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣಿಸುತ್ತಾರೆ. ಅದರಲ್ಲೂ ನಮ್ಮ ಬಾಲಿವುಡ್ (Bollywood) ಮತ್ತು ಅಮೆರಿಕದ ಹಾಲಿವುಡ್ (Hollywood) ತಾರೆಯರ ಜೀವನಶೈಲಿಯಂತೂ ಯಾರೂ ಸಹ ಅನುಕರಣೆ ಸಹ ಮಾಡಲು ಆಗುವುದಿಲ್ಲ, ಅಂತಹ ಐಷಾರಾಮಿ ಜೀವನಶೈಲಿಯನ್ನು ರೂಢಿಸಿಕೊಂಡಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.















ನಟ-ನಟಿಯರ ಐಷಾರಾಮಿ ಜೀವನ!

ಹಾಗಂತ ಹಣವಿರುವ ಎಲ್ಲಾ ನಟ-ನಟಿಯರು ಹೀಗೆ ಐಷಾರಾಮಿ ಜೀವನಶೈಲಿಯನ್ನು ಹೊಂದಿರುತ್ತಾರೆ ಅಂತ ಹೇಳುವುದಕ್ಕೂ ಸಹ ಆಗುವುದಿಲ್ಲ. ಕೆಲ ಅಪರೂಪದ ನಟರು ತುಂಬಾನೇ ಶ್ರೀಮಂತರಾಗಿದ್ದರೂ ಸಹ ಅವರ ಜೀವನವನ್ನು ತುಂಬಾನೇ ಸರಳವಾಗಿ ಜೀವಿಸುತ್ತಿರುತ್ತಾರೆ ಅಂತ ಹೇಳಬಹುದು. ಇದಕ್ಕೆ ತಕ್ಕ ಉದಾಹರಣೆ ಎಂಬಂತೆ ಸರಳವಾಗಿ ಜೀವನ ನಡೆಸುತ್ತಿರುವ ಹಾಲಿವುಡ್‌ನ ಶ್ರೀಮಂತ ನಟನೊಬ್ಬ ಇಲ್ಲಿದ್ದಾರೆ.

ಈ ನಟ ಬಹು ಮಿಲಿಯನೇರ್!

ಈ ನಟ ಬಹು ಮಿಲಿಯನೇರ್‌. ಆದರೂ ಕೂಡ ಸೆಕೆಂಡ್ ಹ್ಯಾಂಡ್ ಕಾರಲ್ಲಿ ಓಡಾಡ್ತಾರಂತೆ. ಈ ಹಾಲಿವುಡ್ ನಟ ಬಹು ಮಿಲಿಯನೇರ್ ಆಗಿದ್ದರೂ, ಅವರು ಇನ್ನೂ 20 ವರ್ಷ ಹಳೆಯ ಸೆಕೆಂಡ್ ಹ್ಯಾಂಡ್ ಕಾರನ್ನು ಓಡಿಸುತ್ತಾರೆ. ಆಗಾಗ್ಗೆ ಸಾರ್ವಜನಿಕ ಸಾರಿಗೆಯಲ್ಲಿ ಕೂತು ಓಡಾಡುತ್ತಾರಂತೆ.

ಓಡಾಡೋದು ಮಾತ್ರ ಸೆಕೆಂಡ್ ಹ್ಯಾಂಡ್‌ ಕಾರಲ್ಲಿ!

ನಟ ಕ್ರಿಶ್ಚಿಯನ್ ಬೇಲ್ ಒಮ್ಮೆ ವಿಶ್ವದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಲ್ಲಿ ಒಬ್ಬರಾಗಿದ್ದರು. ನಟ ಡಾರ್ಕ್ ನೈಟ್ ಟ್ರೈಲಾಜಿ ಮತ್ತು ಟರ್ಮಿನೇಟರ್ ಫಿಲ್ಮ್‌ಗಳಂತಹ ದೊಡ್ಡ ಫ್ರಾಂಚೈಸಿಗಳ ಮುಖ್ಯಸ್ಥರಾಗಿದ್ದರು, ಜೊತೆಗೆ ಥಾರ್ ಲವ್ ಮತ್ತು ಥಂಡರ್‌ನಲ್ಲಿ ಮಾರ್ವೆಲ್ ಖಳನಾಯಕನಾಗಿ ನಟಿಸಿದ್ದಾರೆ.

ವರದಿಗಳ ಪ್ರಕಾರ, ಈ ನಟ 2023 ರ ಹೊತ್ತಿಗೆ 120 ಮಿಲಿಯನ್ ಡಾಲರ್ ನಿವ್ವಳ ಮೌಲ್ಯವನ್ನು ಹೊಂದಿದ್ದಾರೆ (1000 ಕೋಟಿಗಿಂತ ಹೆಚ್ಚು) ಮತ್ತು ಇನ್ನೂ, ಕ್ರಿಶ್ಚಿಯನ್ ಬೇಲ್ ಅವರು 2003 ರಲ್ಲಿ ಹೊಂದಿದ್ದ ಅದೇ ಕಾರನ್ನು ಓಡಿಸುತ್ತಿದ್ದಾರೆ.

ಟೊಯೋಟಾ ಟಕೋಮಾ ಪಿಕ್-ಅಪ್ ಟ್ರಕ್!

ಈ ನಟನು 2003 ರ ಟೊಯೋಟಾ ಟಕೋಮಾ ಪಿಕ್-ಅಪ್ ಟ್ರಕ್ ಅನ್ನು ಹೊಂದಿದ್ದಾರೆ. “ಇದು ತುಂಬಾನೇ ಅನುಕೂಲಕರವಾಗಿದೆ ಮತ್ತು ನನ್ನ ಎಲ್ಲಾ ಸ್ನೇಹಿತರಿಗೆ ಇದನ್ನು ಚಲಿಸಲು ಬರುತ್ತದೆ. ಒಮ್ಮೆ ನೀವು ಪಿಕಪ್ ಟ್ರಕ್ ಹೊಂದಿದ್ದರೆ, ನೀವು ಬೇರೆ ಯಾವುದರ ಬಗ್ಗೆಯೂ ಚಿಂತೆ ಮಾಡಬೇಕಿಲ್ಲ. ನಾನು ಅದನ್ನು ಸೆಕೆಂಡ್ ಹ್ಯಾಂಡ್ ಖರೀದಿಸಿದೆ ಮತ್ತು ನಾನು ಅದನ್ನು 13 ವರ್ಷಗಳಿಂದ ಹೊಂದಿದ್ದೇನೆ” ಎಂದು ಅವರು ಒಮ್ಮೆ ಸಂದರ್ಶನವೊಂದರಲ್ಲಿ ಹೇಳಿದ್ದರು.

ತುಂಬಾ ಸಿಂಪಲ್‌ ಕ್ರಿಶ್ಚಿಯನ್ ಬೇಲ್!

ಬೇಲ್ ಅವರು ಲಾಸ್ ಏಂಜಲೀಸ್‌ನ ಸುತ್ತಲೂ ಕಾರನ್ನು ಓಡಿಸುತ್ತಿರುವುದನ್ನು ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ ಸ್ವತಃ ತಾವೇ ಇಳಿದು ಇಂಧನ ತುಂಬಿಸಿಕೊಳ್ಳುತ್ತಿರುವುದನ್ನು ಆಗಾಗ್ಗೆ ಕ್ಯಾಮೆರಾದಲ್ಲಿ ಅನೇಕರು ಸೆರೆ ಹಿಡಿದಿದ್ದಾರಂತೆ. ಕ್ರಿಶ್ಚಿಯನ್ ಬೇಲ್ ಒಬ್ಬ ಪರಿಚಿತ ಲೋಕೋಪಕಾರಿ ಸಹ ಆಗಿದ್ದಾರಂತೆ.

ಬೇಲ್ ಒಬ್ಬ ಪರಿಚಿತ ಲೋಕೋಪಕಾರಿ ಕೂಡ ಆಗಿದ್ದು, ವಿಶೇಷವಾಗಿ ಯುಎಸ್‌ನಲ್ಲಿರುವ ಸಾಕು ಒಡಹುಟ್ಟಿದವರು ಒಟ್ಟಿಗೆ ಇರುವುದನ್ನು ಖಚಿತಪಡಿಸಿಕೊಳ್ಳಲು ಅವರು ಒಂದು ವಿನೂತನವಾದ ಯೋಜನೆಯೊಂದರಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಹೆಸರುವಾಸಿಯಾಗಿದ್ದಾರಂತೆ.

ಅವರ ದತ್ತಿಯು ಸಾಕು ಮಕ್ಕಳಿಗಾಗಿ ಆಶ್ರಯ ಮನೆಗಳನ್ನು ನಿರ್ಮಿಸುವಲ್ಲಿ ತೊಡಗಿಸಿಕೊಂಡಿದೆ. ಯುನಿಲಾಡ್ ಪ್ರಕಾರ, ಅವರು ಈ ಉದ್ದೇಶಕ್ಕಾಗಿ 22 ಮಿಲಿಯನ್ ಎಂದರೆ 180 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. “ಇದು ನನಗೆ ನಂಬಲಾಗದಷ್ಟು ತೃಪ್ತಿ ತಂದಿದೆ ಮತ್ತು ನಾನು ಪ್ರತಿ ಹಂತದಲ್ಲೂ ಇದರಲ್ಲಿ ತೊಡಗಿಸಿಕೊಳ್ಳಲು ಬಯಸುತ್ತೇನೆ” ಎಂದು ಅವರು ಪೋರ್ಟಲ್‌ಗೆ ತಿಳಿಸಿದರು.